ಬುಧವಾರ, ಜನವರಿ 26, 2011

'ಕವಿಕಿರಣ' ಮೂಡಿದ ಪರಿ

     ನಮ್ಮ ನಿಮ್ಮ 'ಕವಿಕಿರಣ'ದ ಪ್ರಾರಂಭವಾದ ಹಿನ್ನೆಲೆ ಅವಲೋಕಿಸಿದಾಗ ಸುಮಧುರ ಬಾಂಧವ್ಯದ ಕನಸು ನನಸಾಗಿಸುವ ಸಹೃದಯತೆ ಅದರಲ್ಲಿರುವುದು ಗೋಚರವಾಗುತ್ತದೆ. ವಂಶವೃಕ್ಷದ ಸರಪಳಿಗಳನ್ನು ಹುಡುಕಿ, ಜೋಡಿಸಿ, ಬೆಸೆಯುವ ಕಾರ್ಯಕ್ಕೆ ಮನ್ನಣೆ ಬಂದಿದ್ದು ಹಾಗೂ ಆ ಹಾದಿಯಲ್ಲಿ ಮುನ್ನಡೆಯುವ ಪ್ರೇರಣೆ ಸಾಕಾರವಾದದ್ದು ಶಿವಮೊಗ್ಗದ ಕವಿ ಸುರೇಶರ ಮನೆಯಲ್ಲಿ ದಿನಾಂಕ     ೨೮-೦೧-೨೦೦೭ರಂದು ಅವರು ಪ್ರಾಯೋಜಿಸಿದ ಕವಿ ಕುಟುಂಬಗಳ ಮತ್ತು ಬಂಧು-ಬಳಗದವರ ಪ್ರಥಮ ಸಮಾವೇಶದಲ್ಲಿ. ಕೆಳದಿಯಲ್ಲಿ ಶ್ರೀ ರಾಮಮೂರ್ತಿ ಸಹೋದರರು ದಿನಾಂಕ ೨೫-೧೨-೦೭ರಲ್ಲಿ ನಡೆಸಿಕೊಟ್ಟ ಎರಡನೆಯ ಸಮಾವೇಶದಲ್ಲಿ ಈ ದಿಸೆಯಲ್ಲಿ ಕೆಲವು ಧೃಢ ಹೆಜ್ಜೆಗಳನ್ನಿಡಲಾಯಿತು. ಅವುಗಳಲ್ಲಿ ಒಂದು ಸಂವಹನ ಮಾಧ್ಯಮವಾಗಿ ಒಂದು ಪತ್ರಿಕೆಯನ್ನು ಹೊರತರಬೇಕೆಂಬ ನಿರ್ಣಯ. ಕವಿ ಸುರೇಶ್ ಒಂದು ಮಾದರಿ ವಾರ್ಷಿಕ ಪತ್ರಿಕೆಯನ್ನು 'ಕೆಳದಿ ಕವಿವಾಹಿನಿ' ಎಂಬ ಹೆಸರಿನಲ್ಲಿ ಸಿದ್ಧಪಡಿಸಿ ತಂದಿದ್ದರು. ಪತ್ರಿಕೆ ಆರಂಭದ ಕಲ್ಪನೆ ಇದರಿಂದ ಅಲ್ಲಿ ಬಂದವರೆಲ್ಲರಿಗೂ ಆಯಿತು. ಆ ಮಾದರಿ ಪತ್ರಿಕೆ ಇದೋ ನಿಮ್ಮ
ಮುಂದೆ:

 
       ನಂತರದಲ್ಲಿ ಪರಿಷ್ಕರಿಸಿ ಕಳುಹಿಸಿಕೊಟ್ಟ  'ಕೆಳದಿಕವಿವಾಹಿನಿ':


     ಕವಿಕುಟುಂಬಗಳು ಮತ್ತು ಬಂಧು-ಬಳಗದವರ ನಡುವೆ ಸ್ನೇಹ ಸೇತುವಿನಂತೆ ಕಾರ್ಯ ಮಾಡಲು ಪತ್ರಿಕೆ ಪ್ರಾರಂಭಿಸುವ ಬಗ್ಗೆ ಒಂದು ಸಮಿತಿಯನ್ನು ಕೆಳಕಂಡಂತೆ ರಚಿಸಿ ನಿರ್ಣಯವಾಯಿತು:
ಶ್ರೀ/ಶ್ರೀಮತಿಯರಾದ ೧. ಕ.ವೆಂ.ನಾಗರಾಜ್ - ಸಂಪಾದಕರು, ೨. ಕವಿ ಸುರೇಶ್ - ಸಹಸಂಪಾದಕರು, ೩. ಎಸ್.ಕೆ.ಗೋಪಿನಾಥ್, ೪. ಶೈಲಜಾ ಪ್ರಭಾಕರ್, ೫. ಕೆ.ಎನ್. ಶಿವಪ್ರಸಾದ್, ೬. ಎಂ.ಎಸ್. ನಾಗೇಂದ್ರ, ೭. ಕೆ.ವೆಂಕಟೇಶ ಜೋಯಿಸ್ ಮತ್ತು ೮. ಕೆ.ಶ್ರೀಕಂಠ - ಸದಸ್ಯರುಗಳು. ಪತ್ರಿಕೆ ಹೇಗಿರಬೇಕು, ಏನು ಶೀರ್ಷಿಕೆ, ಕಾಲಾವಧಿ, ಎಷ್ಟು ಪ್ರತಿ ಮುದ್ರಿಸಬೇಕು, ವಿತರಣೆ ಹೇಗೆ, ವೆಚ್ಚ ಹೇಗೆ ಭರಿಸುವುದು, ಇತ್ಯಾದಿ ಹಲವು ವಿಷಯಗಳ ಕುರಿತು ಮೇಲ್ಕಂಡವರೊಂದಿಗೆ ಪತ್ರವ್ಯವಹಾರ ನಡೆಸಿ ಚರ್ಚಿಸಲಾಯಿತು. ದಿನಾಂಕ ೧೫-೦೬-೨೦೦೮ರಂದು ಬೆಂಗಳೂರಿನ ಹಿರಿಯರಾದ ಶ್ರೀ ಎಸ್.ಕೆ.ಕೃಷ್ಣಮೂರ್ತಿಯವರ ನಿವಾಸದಲ್ಲಿ ಸಮಿತಿ ಸದಸ್ಯರು ಮತ್ತು ಆಸಕ್ತರು ಸಭೆ ಸೇರಿ ಕೈಗೊಂಡ ಪ್ರಮುಖ ನಿರ್ಧಾರಗಳು:
೧. 'ಕವಿಕಿರಣ' ಎಂಬ ಹೆಸರಿನಲ್ಲಿ ಪತ್ರಿಕೆ ಹೊರತರಬೇಕು. (ಸೂಚಿತವಾಗಿದ್ದ ಶೀರ್ಷಿಕೆಗಳು: ಕವಿಪ್ರಭಾ, ಕವಿಪ್ರಭೆ, ಕವಿಪತ್ರಿಕೆ, ಕವಿಚಕ್ಷು, ಕವಿವಾಣಿ, ಕವಿವಾರ್ತೆ, ಕವಿನೋಟ, ಕವಿವಾಹಿನಿ, ಪರಸ್ಪರ, ಸ್ನೇಹಧಾರಾ, ಕವಿಕಿರಣ, ಪ್ರೇರಣಾ, ಏನೆಂದರೆ, ಹೊಂಗಿರಣ, ಹೊಸದಿಗಂತ, ಅನ್ವೇಷಣೆ, ಆಶಾಕಿರಣ, ಸ್ನೇಹಸೇತು);

೨. ಎ-೪ ಅಳತೆಯಲ್ಲಿ ೨೪ ಪುಟಗಳಿರಬೇಕು;
೩. ಪ್ರತಿ ಕವಿಕುಟುಂಬಗಳವರು ವಾರ್ಷಿಕ ರೂ. ೫೦೦/- ಚಂದಾ ಅನ್ನು ನೀಡಬೇಕು. ಈ ಹಣವನ್ನು ವಾರ್ಷಿಕ ಸಮ್ಮೇಳನ ನಡೆಸಲು ಯಾರೂ ಮುಂದೆ ಬರದಿದ್ದ ಸಂದರ್ಭದಲ್ಲಿ ಬಳಸಲು ಚಿಂತಿಸಬಹುದು; ಕವಿಮನೆತನದ ಹೆಣ್ಣು ಮಕ್ಕಳು ಸೇರಿರುವ ಕುಟುಂಬಗಳವರು ಮತ್ತು ಹಿತೈಷಿಗಳು ಸ್ವಪ್ರೇರಣೆಯಿಂದ ನೀಡಿದ ಹಣವನ್ನು ಸ್ವೀಕರಿಸಬೇಕು;
೪. ಸಂಗ್ರಹವಾಗುವ ಹಣವನ್ನು ಶ್ರೀ ಎಸ್.ಕೆ.ಕೃಷ್ಣಮೂರ್ತಿ ಮತ್ತು ಕವಿಸುರೇಶರ ಹೆಸರಿನಲ್ಲಿ ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕಿನಲ್ಲಿ ಜಂಟಿ ಖಾತೆ ತೆರೆದು ಇರಿಸಬೇಕು;
೫. ರೂ. ೫೦೦೦/- ಮತ್ತು ಮೇಲ್ಪಟ್ಟು ಹಣ ನೀಡಿ ಸಂಚಿಕೆಯ ಪ್ರಾಯೋಜಕರಾಗಬಹುದು;
೬. ಪ್ರಥಮ ಸಂಚಿಕೆಯನ್ನು ಮೂರನೆಯ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಬಿಡುಗಡೆಗೊಳಿಸಬೇಕು.

     ಪ್ರಥಮ ಸಂಚಿಕೆಯ ಪ್ರಾಯೋಜಕರಾಗಿ ಅಮೆರಿಕಾದಲ್ಲಿರುವ ಶ್ರೀ ಕ.ವೆಂ. ಅನಂತ ಮುಂದೆ ಬಂದು ಸಹೃದಯತೆ ಮೆರೆದರು. ಪ್ರಥಮ ಸಂಚಿಕೆಯ ಕರಡು ಸಿದ್ಧಪಡಿಸಿ ಹಿರಿಯರೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಿ ದಿನಾಂಕ ೨೮-೧೨-೨೦೦೮ರಂದು ಬೆಂಗಳೂರಿನಲ್ಲಿ ಶ್ರೀಮತಿ ಪದ್ಮಾವತಮ್ಮ ಸುಬ್ಬರಾವ್ ಮತ್ತು ಶ್ರೀಮತಿ ಮತ್ತು ಎಂ.ಎಸ್.ನಾಗೇಂದ್ರರವರು ಆಯೋಜಿಸಿದ ತೃತೀಯ ವಾರ್ಷಿಕ ಸಮಾವೇಶದಲ್ಲಿ ಬಿಡುಗಡೆಗೊಳಿಸಲಾಯಿತು.
ಶುಭ ಹರಸಿ ಬಂದ ಸಂದೇಶಗಳು:

ದಿ. ಕವಿ ವೆಂಕಟಸುಬ್ಬರಾಯರು ಸ್ವಹಸ್ತಾಕ್ಷರದಲ್ಲಿ ನೀಡಿದ ಸಂದೇಶ

ಶೃಂಗೇರಿ ಶ್ರೀ ಶಾರದಾ ಪೀಠದ ವತಿಯಿಂದ

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರಿಂದ

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಿಂದ

ಸಾಗರದ ಅಸಿಸ್ಟೆಂಟ್ ಕಮಿಷನರರವರಿಂದ

ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಿಂದ


ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ

28-12-2008ರಂದು ಬೆಂಗಳೂರಿನಲ್ಲಿ ನಡೆದ ಕವಿಕುಟುಂಬಗಳ ಮತ್ತು ಬಂಧು-ಬಳಗದವರ ಸಮಾವೇಶದಲ್ಲಿ  'ಕವಿಕಿರಣ' ಬಿಡುಗಡೆಯಾದ ಸಂದರ್ಭದ ಕೆಲವು ದೃಷ್ಯಗಳು

ಶುಭ ಹಾರೈಸಿದ ಶ್ರೀ ಸಾ.ಕ.ಕೃಷ್ಣಮೂರ್ತಿಯವರು

ವಯೋವೃದ್ಧ ಶ್ರೀ ಹೆಬ್ಬೈಲು ಕೃಷ್ಣಮೂರ್ತಿಯವರಿಂದ ಸಂಚಿಕೆ ಬಿಡುಗಡೆ
ವೇದಿಕೆಯಲ್ಲಿ: ಶ್ರೀಯುತ ಸಾ.ಕ.ಕೃಷ್ನಮೂರ್ತಿ, ಡಾ.ಕೆಳದಿ ಕೃಷ್ಣಜೋಯಿಸ್, ಹೆಬ್ಬೈಲು ಕೃಷ್ಣಮೂರ್ತಿ, ದಿ. ಕವಿ ವೆಂಕಟಸುಬ್ಬರಾವ್, ಎಂ.ಎಸ್. ನಾಗೇಂದ್ರ, ಮೊಮ್ಮಗಳು ಅಕ್ಷಯಳೊಂದಿಗೆ ಕವಿನಾಗರಾಜ್.

ಕವಿಕಿರಣದ ಆಶಯದ ಕುರಿತು ಸಂಪಾದಕ ಕವಿನಾಗರಾಜರ ಮಾತು

ಕವಿ ವೆಂಕಟಸುಬ್ಬರಾಯರು ಹರಸಿದ ಸಂದರ್ಭ



ಸಾಕ್ಷಿಯಾದ ಬಂಧು - ಬಳಗದ ಸಮೂಹ

'ಕವಿಕಿರಣ' ಪತ್ರಿಕೆಯ ನೋಂದಾವಣೆ
ಸರ್ಕಾರಿ ಅಧಿಕಾರಿಯಾಗಿದ್ದರಿಂದ ಪತ್ರಿಕೆಯ ಸಂಪಾದಕನಾಗಿ ಕಾರ್ಯ ನಿರ್ವಹಿಸಲು ಅನುಮತಿ ಕೋರಿ ಬರೆದ ಪತ್ರ
ಶೀರ್ಷಿಕೆ ಪರಿಶೀಲನೆಗಾಗಿ ಸಲ್ಲಿಸಿದ ಮನವಿ
ಜಿಲ್ಲಾ ದಂಡಾಧಿಕಾರಿಯವರಿಂದ ಪತ್ರಿಕೆಗಳ ರಿಜಿಸ್ಟ್ರಾರರಿಗೆ ಪತ್ರ
'ಕವಿಕಿರಣ' ಶೀರ್ಷಿಕೆ ಲಭ್ಯವಾಯಿತು!
ಪತ್ರಿಕೆಯ ಪ್ರಕಾಶಕರು ಮತ್ತು ಮುದ್ರಕರಾಗಿ ಶ್ರೀ ಕವಿ ಸುರೇಶರಿಗೆ ಡಿಕ್ಲರೇಶನ್ ಸಲ್ಲಿಸಲು ನೀಡಿದ ಅಧಿಕಾರ ಪತ್ರ
ಸಲ್ಲಿಸಿದ ಡಿಕ್ಲರೇಶನ್ ಗಳು

                                        


'ಕವಿಕಿರಣ' ಪತ್ರಿಕೆ ನೋಂದಣಿಯಾದ ಅಮೂಲ್ಯ ಕ್ಷಣ
            
ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ