ಭಾನುವಾರ, ಜೂನ್ 30, 2013

ಪೂರ್ಣಿಮಾ ಗೋಪಾಲ್: ಇನ್ನು ನೆನಪು ಮಾತ್ರ


      ದಿ. ಕವಿ ಸುಬ್ರಹ್ಮಣ್ಯಯ್ಯನವರ  ಮೊಮ್ಮಗ ಹಾಗೂ ದಿ. ಹೆಚ್. ವಿ. ಕೃಷ್ಣಮೂರ್ತಿ ಮತ್ತು ಸೀತಮ್ಮನವರ ಕಿರಿಯ ಮಗ ಶ್ರೀ ಹೆಚ್. ಕೆ. ಗೋಪಾಲರ ಪತ್ನಿ ಶ್ರೀಮತಿ ಪೂರ್ಣಿಮಾರವರು ದಿನಾಂಕ ೨೧-೦೬-೨೦೧೩ರಂದು ವಿಧಿವಶರಾದುದು ಎಲ್ಲಾ ಬಂಧುಗಳಿಗೆ ದುಃಖದಾಯಕ ಸಂಗತಿ. ಸಾಗರ ತಾಲ್ಲೂಕಿನ ಒಂದು ಕುಗ್ರಾಮ ಕೆಳುವೆಯಲ್ಲಿನ ಈಶ್ವರ ದೇವಾಲಯದ ಅರ್ಚಕರಾಗಿ ಬಡತನದ ಜೀವನ ನಡೆಸುತ್ತಿದ್ದ ಗೋಪಾಲರಿಗೆ ಬೆನ್ನೆಲುಬಾಗಿ, ಎಲ್ಲಾ ರೀತಿಯಲ್ಲಿ ಉತ್ತಮ ಸಹಕಾರಿಯಾಗಿದ್ದ ಪೂರ್ಣಿಮಾರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಸಂಬಂಧಿಸಿದ ಎಲ್ಲರಿಗೆ ನೀಡಲಿ, ಅಗಲಿದ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಕವಿಕಿರಣ ಬಳಗ ಪ್ರಾರ್ಥಿಸುತ್ತದೆ.
     ಮೂರು ವರ್ಷಗಳ ಹಿಂದೆ ನಾವು ಕೆಲವು ಬಂಧುಗಳು ಕೆಳುವೆಗೆ ಗೋಪಾಲರ ಮನೆಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಅವರ ಆತಿಥ್ಯ ಸ್ವೀಕರಿಸಿ ಸಂತಸಪಟ್ಟಿದ್ದ ಸಂದರ್ಭದಲ್ಲಿ ತೆಗೆದಿದ್ದ ಕೆಲವು ಫೋಟೋಗಳು ಇವು:







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ