ಸೋಮವಾರ, ನವೆಂಬರ್ 5, 2018

ಕವಿಕಿರಣ


      ಕವಿಕಿರಣ - ಇದೊಂದು ವಿಶಿಷ್ಟ, ವಿಭಿನ್ನ, ವಿನೂತನ ತ್ರೈಮಾಸಿಕ ಪತ್ರಿಕೆ. ಕೆಳದಿ ಕವಿಮನೆತನದ ಪತ್ರಿಕೆಯಾಗಿ 2008ರಲ್ಲಿ ಪ್ರಾರಂಭವಾಗಿ ಸತತವಾಗಿ 11 ವರ್ಷಗಳಿಂದ ಕವಿಮನೆತನದ ಹಿರಿಯರ ಪರಿಚಯ, ಸಾಧನೆಗಳ ಜೊತೆಗೆ ಕನ್ನಡದ ಹೆಮ್ಮೆಯ ಕೆಳದಿ ಸಂಸ್ಥಾನದ ಇತಿಹಾಸದ ಪರಿಚಯವನ್ನೂ ಮಾಡಿಕೊಡುತ್ತಾ ಬಂದಿದೆ. ಈಗ ಪತ್ರಿಕೆಯನ್ನು ಸಾಮಾಜಿಕ ಪತ್ರಿಕೆಯಾಗಿಸಿ, ಪ್ರಾರಂಭಿಕ ವರ್ಷದಲ್ಲಿ ತ್ರೈಮಾಸಿಕವಾಗಿ ಮತ್ತು ಮುಂದಿನ ವರ್ಷದಿಂದ ಮಾಸಿಕ ಪತ್ರಿಕೆಯಾಗಿ ಹೊರಬರಲಿದೆ. ಕವಿಮನೆತನದ ಪತ್ರಿಕೆಯಾಗಿದ್ದರೂ, ಅದರಲ್ಲಿನ ವಿಷಯಗಳು ಕೇವಲ ಮನೆತನದವರಿಗೆ ಮಾತ್ರ ಸೀಮಿತವಾಗಿರದೆ ಸಮಾಜದ ಎಲ್ಲರೂ ತಿಳಿಯಬೇಕಾದ, ಗಮನಿಸಬೇಕಾದ ಅಂಶಗಳನ್ನು ಒಳಗೊಂಡಿರುತ್ತಿದ್ದುದು ವಿಶೇಷ. ಕೆಳದಿಯ ಮತ್ತು ಕವಿಮನೆತನದ ಇತಿಹಾಸ ತಿಳಿಯಲಿಚ್ಛಿಸುವ ಅಧ್ಯಯನಾಕಾಂಕ್ಷಿಗಳಿಗೆ ಈ ಪತ್ರಿಕೆಯ ಸಂಚಿಕೆಗಳು ಅಮೂಲ್ಯ ಮತ್ತು ಸಂಗ್ರಹಯೋಗ್ಯವಾಗಿವೆ. ಈಗ ಈ ಪತ್ರಿಕೆಯನ್ನು ಕವಿಕಿರಣ ಚಾರಿಟಬಲ್ ಟ್ರಸ್ಟ್ ಸಾರ್ವತ್ರಿಕ ಪತ್ರಿಕೆಯಾಗಿ ಪರಿವರ್ತಿಸಿ ಮತ್ತಷ್ಟು ವ್ಯಾಪಕ ವಿಷಯಗಳೊಂದಿಗೆ ಹೊಸ ರೂಪದಲ್ಲಿ ಹೊರತರುತ್ತಿದೆ.
      ಕವಿಕಿರಣ ಪತ್ರಿಕೆಯ ವಿನೂತನ ಅವತರಣಿಕೆಯಲ್ಲಿ ಒಳಗೊಳ್ಳಲಿರುವ ವಿಷಯಗಳೆಂದರೆ: ಇತಿಹಾಸ, ಸಾಹಿತ್ಯ, ಸಂಸ್ಕಾರ, ವೇದ, ಯೋಗ, ವ್ಯಕ್ತಿತ್ವ ವಿಕಸನಕ್ಕೆ ಪ್ರೇರಕ ಅಂಶಗಳು, ಇತ್ಯಾದಿ. ಕೆಳದಿ ಇತಿಹಾಸ/ಮತ್ತು ಕವಿಮನೆತನದವರ ಕುರಿತು ಕನಿಷ್ಠ 2 ಲೇಖನಗಳು ಇರುತ್ತವೆ. ಸಾಮಾಜಿಕ ಸ್ವಾಸ್ಥ್ಯಕ್ಕೆ ಹಿತವೆನಿಸುವ, ಸಮಗ್ರತೆ, ಸಾಮರಸ್ಯತೆಗಳಿಗೆ ಆದ್ಯತೆ ನೀಡುವ, ಸಜ್ಜನಶಕ್ತಿಯನ್ನು ಜಾಗೃತಗೊಳಿಸುವ ಧನಾತ್ಮಕ ಮತ್ತು ಸಕಾರಾತ್ಮಕ ವಿಚಾರಗಳಿಗೆ ಪ್ರಾಧಾನ್ಯತೆ ಇರುತ್ತದೆ. ಈಗ ವಿವಿಧ ಮಾಧ್ಯಮಗಳಲ್ಲಿ ನಕಾರಾತ್ಮಕ ಮತ್ತು ವಿಭಜಕ ಸಂಗತಿಗಳಿಗೆ ಸಿಗುತ್ತಿರುವ ಅನಗತ್ಯ ವೈಭವೀಕರಣ, ಪ್ರಚಾರಗಳ ಹಿನ್ನೆಲೆಯಲ್ಲಿ ಕವಿಕಿರಣದ ಈ ಸದುದ್ದೇಶಕ್ಕೆ ಮಹತ್ವವಿದೆ. ಪ್ರಾರಂಭದಲ್ಲಿ ಕನಿಷ್ಠ ೩೨ಪುಟಗಳಿರುವ ಪತ್ರಿಕೆ, ಚಂದಾದಾರರ ಮತ್ತು ಪೋಷಕರುಗಳ ಬೆಂಬಲದೊಂದಿಗೆ ಮುಂದೆ ಮತ್ತಷ್ಟು ಪುಟಗಳನ್ನು ಹೆಚ್ಚಿಸಿಕೊಳ್ಳಲಿದೆ ಮತ್ತು ಮಾಸಿಕ ಪತ್ರಿಕೆಯಾಗಿಯೂ ಹೊರಹೊಮ್ಮಲಿದೆ. ಇದಕ್ಕೆ ತಮ್ಮೆಲ್ಲರ ಉದಾರ ಪ್ರೋತ್ಸಾಹ ಬೆನ್ನೆಲುಬಾಗಲಿದೆ. ಮಹಾಪೋಷಕರು ಅಥವ ಪೋಷಕರಾದಲ್ಲಿ ಟ್ರಸ್ಟ್ ವತಿಯಿಂದ ನಡೆಯುವ ಸೇವಾಚಟುವಟಿಕೆಗಳಿಗೆ ಸಹಕಾರಿಯಾಗುತ್ತದೆ. ಕೇವಲ ಚಂದಾದಾರರಾಗುವ ಮನಸ್ಸಿರುವವರು ಆಜೀವ ಚಂದಾದಾರರಾಗಬಹುದು ಅಥವ ಪಂಚವಾರ್ಷಿಕ ಚಂದಾದಾರರಾಗಬಹುದು. ವಿವರ ಹೀಗಿದೆ:
ಮಹಾಪೋಷಕರು ; ರೂ. 15000/- ಮತ್ತು ಮೇಲ್ಪಟ್ಟು ನೀಡುವವರು
ಪೋಷಕರು:       ರೂ. 10000/- ಮತ್ತು ಮೇಲ್ಪಟ್ಟು ನೀಡುವವರು
ಆಜೀವ ಚಂದಾದಾರರು: ರೂ. 6000/- ಮತ್ತು ಮೇಲ್ಪಟ್ಟು ನೀಡುವವರು
ಪಂಚವಾರ್ಷಿಕ ಚಂದಾ: ರೂ. 500/- 
ಚಂದಾದಾರರಾಗಬಯಸುವವರು ತಮ್ಮ ಹೆಸರು, ಅಂಚೆ ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸಗಳನ್ನು ತಿಳಿಸಿ ನೋಂದಾಯಿಸಿಕೊಳ್ಳಲು ವಿನಂತಿಸಿದೆ.
ಪ್ರಾರಂಭಿಕ ಕೊಡುಗೆ:
     ಮಹಾಪೋಷಕರು ಮತ್ತು ಪೋಷಕರುಗಳು ಆಜೀವ ಚಂದಾದಾರರಾಗಿರುತ್ತಾರಲ್ಲದೆ. ಅವರು ತಿಳಿಸುವ ಮತ್ತೊಬ್ಬರಿಗೆ 5 ವರ್ಷಗಳ ಕಾಲ ಕವಿಕಿರಣವನ್ನು ಉಡುಗೊರೆಯಾಗಿ ಕಳಿಸಿಕೊಡಲಾಗುವುದು.
     ಆಜೀವ ಚಂದಾದಾರರಿಗೆ ಅವರು ತಿಳಿಸುವ ಒಬ್ಬರಿಗೆ ಒಂದು ವರ್ಷ ಪತ್ರಿಕೆಯನ್ನು ಉಡುಗೊರೆಯಾಗಿ ಕಳಿಸಿಕೊಡಲಾಗುವುದು. 
     ಹತ್ತು ಪಂಚವಾರ್ಷಿಕ ಚಂದಾದಾರರನ್ನು ನೋಂದಾಯಿಸುವವರಿಗೆ, ಅವರು ತಿಳಿಸುವ ಮತ್ತೊಬ್ಬರಿಗೆ 5 ವರ್ಷಗಳ ಕಾಲ ಪತ್ರಿಕೆಯನ್ನು ಉಡುಗೊರೆಯಾಗಿ ಕಳಿಸಲಾಗುವುದು.
ಅಧ್ಯಕ್ಷರು ಮತ್ತು ವಿಶ್ವಸ್ತರು,
ಕವಿಕಿರಣ ಚಾರಿಟಬಲ್ ಟ್ರಸ್ಟ್, ಹಾಸನ/ಬೆಂಗಳೂರು/ಶಿವಮೊಗ್ಗ.

ಸಂಪರ್ಕ ವಿಳಾಸಗಳು: 
1. ಶ್ರೀ ಕ.ವೆಂ. ನಾಗರಾಜ್, ಸಂಪಾದಕ, ಕವಿಕಿರಣ ಮತ್ತು ಅಧ್ಯಕ್ಷರು, ಕವಿಕಿರಣ ಚಾರಿಟಬಲ್ ಟ್ರಸ್ಟ್,     # 27, ರೂಪಶ್ರೀ, 4ನೆಯ ಅಡ್ಡರಸ್ತೆ, ಅಮರಜ್ಯೋತಿನಗರ, ನಾಗರಭಾವಿ ಮುಖ್ಯ ರಸ್ಯೆ, ವಿಜಯನಗರ, ಬೆಂಗಳೂರು - 560040. ದೂ: 9448501804. ಇ ಮೇಲ್: kavinagaraj2010@gmail.com 
2. ಶ್ರೀ ಕವಿ ವೆಂ. ಸುರೇಶ್, ಉಪಾಧ್ಯಕ್ಷರು, ಕವಿಕಿರಣ ಚಾರಿಟಬಲ್ ಟ್ರಸ್ಟ್, ಸೌಪರ್ಣಿಕಾ, 3ನೆಯ ಮುಖ್ಯ ರಸ್ತೆ, 3ನೆಯ ಅಡ್ಡರಸ್ತೆ, ಬಸವೇಶ್ವರನಗರ, ಶಿವಮೊಗ್ಗ - 577204. ದೂ: 9448932866.
3. ಡಾ. ಕೆ.ಜಿ. ವೆಂಕಟೇಶಜೋಯಿಸ್, ಸಹಕಾರ್ಯದರ್ಶಿ, ಕವಿಕಿರಣ ಚಾರಿಟಬಲ್ ಟ್ರಸ್ಟ್, #316, ಎಂ.ಐ.ಜಿ., ಕೆಳದಿ ರಸ್ತೆ, 1ನೆಯ ಅಡ್ಡರಸ್ತೆ, ರಾಜಗುರು ಕಲ್ಯಾಣ ಮಂಟಪದ ಹತ್ತಿರ, ಅಣಲೆಕೊಪ್ಪ, ಸಾಗರ - 577401. ದೂ: 944898 39739. 
4. ಶ್ರೀ ಎಂ.ಜೆ. ಪಾಂಡುರಂಗಸ್ವಾಮಿ, ವಿಶ್ವಸ್ತರು, ಕವಿಕಿರಣ ಚಾರಿಟಬಲ್ ಟ್ರಸ್ಟ್, ಬಾಲಾಜಿ ಪ್ರಿಂಟರ್ಸ್, ದೊಡ್ಡಿ ರಸ್ತೆ, ರವೀಂದ್ರನಗರ, ಹಾಸನ - 573201. ದೂ:  88847 67475, 98456 61956. 
5. ಶ್ರೀಮತಿ ಬಿಂದು ರಾಘವೇಂದ್ರ, ಕೋಶಾಧಿಕಾರಿ,  ಕವಿಕಿರಣ ಚಾರಿಟಬಲ್ ಟ್ರಸ್ಟ್,     # 27, ರೂಪಶ್ರೀ, 4ನೆಯ ಅಡ್ಡರಸ್ತೆ, ಅಮರಜ್ಯೋತಿನಗರ, ನಾಗರಭಾವಿ ಮುಖ್ಯ ರಸ್ಯೆ, ವಿಜಯನಗರ, ಬೆಂಗಳೂರು - 560040. ಇ ಮೇಲ್:      hsn.bindu@gmail.com 
ಚಂದಾದಾರರಾಗಬಯಸುವವರು ಮೊಬಲಗನ್ನು ಟ್ರಸ್ಟಿನ ಈ ಯಾವುದಾದರೂ ಒಂದು ಖಾತೆಗೆ ಜಮಾ ಮಾಡಿ ಮಾಹಿತಿ ಕೊಡಲು ವಿನಂತಿಸಿದೆ.
ಖಾತೆದಾರರು: ಕವಿಕಿರಣ ಚಾರಿಟಬಲ್ ಟ್ರಸ್ಟ್, ಕೆನರಾ ಬ್ಯಾಂಕ್, ವಿದ್ಯಾನಗರ ಶಾಖೆ, ಹಾಸನ. SB 3150101004917.    IFSC Code CNRB0003150
ಅಥವ 
ಕವಿಕಿರಣ ಚಾರಿಟಬಲ್ ಟ್ರಸ್ಟ್, ಕೆನರಾ ಬ್ಯಾಂಕ್, ವಿಜಯನಗರ-ಬೆಂಗಳೂರು ಶಾಖೆ, ಬೆಂಗಳೂರು . SB 1146101943550.    IFSC Code CNRB0001146
*****




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ